ಅಭಿಪ್ರಾಯ / ಸಲಹೆಗಳು

ಸಂಚಾರ

ವಾಹನ ಕಲಿಕೆ (Learning to Drive)

1] ಯಾವುದೇ ಒಬ್ಬ ವ್ಯಕ್ತಿ ವಾಹನ ಚಲಾಯಿಸಲು ಕಲಿಯುವ ಪರವಾನಿಗೆ (Lerners’ License) ಪಡೆಯಬೇಕಾಗುತ್ತದೆ.

2] ಕಲಿಯುವ ಪರವಾನಿಗೆ ಪಡೆದು ವಾಹನ ಚಲಾಯಿಸುವವರು ತಮ್ಮ ವಾಹನದ ಮುಂದೆ ಮತ್ತು ಹಿಂದೆ ಚೌಕಾಕಾರದ ಬಿಳಿ ಪ್ಲೇಟ್ ನ್ನು ಕಾಣುವ ಹಾಗೆ ಹಾಕಿಸಿ 17 "(17 ಸೆಂ) x 7" (17 ಸೆಂ)  ನ ಕಾರ್ಡ ನ್ನು ಅಂಟಿಸಿರಬೇಕು ಆ ಪ್ಲೇಟ್ ನಲ್ಲಿ ಕಡ್ಡಾಯವಾಗಿ ಕೆಂಪು ಬಣ್ಣದ L ಅಕ್ಷರವನ್ನು ಬರೆಸಿರಬೇಕು. ಅಕ್ಷರ ಎತ್ತರ 4`` (10cm) ಮತ್ತು 3.5`` (8.5 cm) ಅಗಲವಿರಬೇಕು.

3] ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಕಲಿಯುವ ಪರವಾನಿಗೆ ಇಟ್ಟುಕೊಂಡಿರಬೇಕು.

4] ಕಲಿಯುವ ಪರವಾನಿಗೆ 6 ತಿಂಗಳ ಅವಧಿಯವರೆಗಿರುತ್ತದೆ ಮತ್ತು ಇದಕ್ಕೆ ಯಾವುದೇ ಹೆಚ್ಚಿನ ಅವಧಿ ಸೇರಿಸುವದಿಲ್ಲ.

5] ಕಲಿಯುವ ಪರವಾನಿಗೆಯು ಪರವಾನಿಗೆ ಪಡೆದ ರಾಜ್ಯದಲ್ಲಿ ಮಾತ್ರ ಮಾನ್ಯತೆ ಪಡೆದಿರುತ್ತದೆ.

6] ಕನಿಷ್ಠ 18 ವರ್ಷ ವಯಸ್ಸು ಇರುವವರಿಗೆ ಕಲಿಯುವ ಪರವಾನಿಗೆ ನೀಡಲಾಗುತ್ತದೆ.

 ಕಾರಿನ ಕಲಿಯುವ ಪರವಾನಿಗೆ ಪಡೆದ ಚಾಲಕ

ಕಾರಿನ ಚಾಲಕ (ಕಲಿಯುವ ಪರವಾನಿಗೆ ಪಡೆದವನು ) ತನ್ನೊಂದಿಗೆ ಚಲನಾ ಪರವಾನಿಗೆ ಹೊಂದಿದವರನ್ನು ಕಡ್ಡಾಯವಾಗಿ ಜೊತೆಯಲ್ಲಿ ಇಟ್ಟುಕೊಳ್ಳಬೇಕು. ಅವನು ವಾಹನವನ್ನು ನಿಲ್ಲಿಸಲು ಅನುವಾಗುವಂತಹ ಸ್ಥಳದಲ್ಲಿ ಕುಳಿತಿರಬೇಕು.

 ಶಾಶ್ವತ ಪರವಾನಿಗೆ ಹೊಂದಿದವರು

1] ಶಾಶ್ವತ ಪರವಾನಿಗೆಯು ಯಾವ ವಾಹನದ ವಿಧಕ್ಕೆ ನೀಡಲಾಗಿದೆಯೋ ಅದಕ್ಕೆ ಮಾತ್ರ ಮಾನ್ಯತೆ ಪಡೆದಿರುತ್ತದೆ.

2] ಅವಧಿ ಮುಗಿದ ನಂತರ ನವೀಕರಿಸಲು 30 ದಿನಗಳ ಅವಧಿ ನೀಡಲಾಗಿದೆ.

3] ಶಾಶ್ವತ ಪರವಾನಿಗೆ ಅರ್ಜಿ ಸಲ್ಲಿಸಲು ಕನಿಷ್ಟ 18 ವರ್ಷ ವಯಸ್ಸಾಗಿರಬೇಕು. ಬಾಡಿಗೆ ಚಾಲಕನಿಗೆ 20 ವರ್ಷ

   ವಾಗಿರಬೇಕು. ಬಾಡಿಗೆ ಚಾಲಕನು ವಾಹನ ಚಲಾಯಿಸುವಾಗ ಕಡ್ಡಾಯವಾಗಿ ತನ್ನ ಪರವಾನಿಗೆ ಹೊಂದಿರಬೇಕು.

4] ಶಾಶ್ವತ ಪರವಾನಿಗೆ ಭಾರತದಾದ್ಯಂತ ಮಾನ್ಯತೆ ಪಡೆದಿರುತ್ತದೆ.  

 ಚಲಾಯಿಸುವ ಮೊದಲು ಖಾತ್ರಿ ಪಡಿಸಬೇಕಾದದ್ದು:

1] ನಿಮ್ಮ ವಾಹನವನ್ನು ನೋಂದಣಿ ಮಾಡಿಸಿರಬೇಕು.

2] ನೋಂದಣಿ ಸಂಖ್ಯೆಯನ್ನು ವಾಹನದ ಹಿಂದೆ ಮತ್ತು ಮುಂದೆ ನಿಗಧಿಪಡಿಸಿದ ಸ್ಥಳದಲ್ಲಿ ಪ್ರದರ್ಶಿಸಬೇಕು.

3] ಅದರ ವಿಮೆಯಲ್ಲಿ ಮೂರನೇಯ ವ್ಯಕ್ತಿಯ ಹೊಣೆ ಒಳಗೊಂಡಿರಬೇಕು.

4] ವಾಹನವು ರಸ್ತೆಯಲ್ಲಿ ಚಾಲಾಯಿಸುವ ಯೋಗ್ಯತೆಯನ್ನು ಹೊಂದರಬೇಕು. ಚಾಲಾಯಿಸಲು ಯೋಗ್ಯವಲ್ಲದ ವಾಹನ 

   ನಿಮ್ಮ ಮತ್ತು ಇತರರ ಜೀವಕ್ಕೆ ಅಪಾಯವನ್ನೊಡ್ಡುವ ಸಂಭವವಿರುತ್ತದೆ. 

5] ವಾಹನವನ್ನು ನಿಯಂತ್ರಿಸಲು ಆಗದ ಯಾವುದೇ ಮತ್ತಿನ ಸೇವನೆ ಮಾಡಬಾರದು.

6] ನೀವು ಚಲಾಯಿಸುವ ವಾಹನದ ಚಲನಾ ಪರವಾನಿಗೆಯನ್ನು ಹೊಂದಿರಬೇಕು.

7] ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಚಲಾಯಿಸಲು ಸಿದ್ಧರಿರಬೇಕು.

ಕಾನೂನಿನೊಳಗೆ ನಿಮ್ಮ ವಾಹನ

1] ನೋಂದಣಿ ಮಾಡಿಸಿರಬೇಕು.

2] ಹೆಡ್ ಲೈಟ್ ಹೊಂದಿರಬೇಕು ಮತ್ತು ಹಿಂದಿನ ದೀಪಗಳು ನಂಬರ ಪ್ಲೇಟ್ ಕಾಣುವ ಹಾಗೆ ಹಾಕಬೇಕು.

3] ಲೈಟ್ ನ ಚಲಾವಣಾ ಅವಧಿ ಸೂರ್ಯ ಮುಳುಗಿದ ½ ಗಂಟೆ ನಂತರ ಪ್ರಾರಂಭವಾಗಿ ಸೂರ್ಯೋದಯದ ಅರ್ಧ ಗಂಟೆ

   ಮುಂಚೆವರೆಗೆ ಮುಂದುವರೆಯುತ್ತದೆ. 

4] ಟೈರ್ ಗಳಲ್ಲಿ ಗಾಳಿ ತುಂಬಿರಬೇಕು ಮತ್ತು ಒಳ್ಳೆಯ ಸ್ಥಿತಿಯಲ್ಲಿರಬೇಕು.

5] ಹಾರ್ನ್ ಒಳ್ಳೆಯ ಸ್ಥಿತಿಯಲ್ಲಿರಬೇಕು.

6] ಸ್ಟೇರಿಂಗ್ ನ ಯಾಂತ್ರಿಕತೆ ಸಮರ್ಪಕವಾಗಿ ನಿರ್ವಹಿಸಬೇಕು ಮತ್ತು ಉತ್ತಮವಾಗಿರಬೇಕು. ಸುಸಜ್ಜಿತ ಎಲೆಕ್ಟ್ರಿಕಲ್ ಅಥವಾ ಮೆಕ್ಯಾನಿಕಲ್ ಸಾಧನ ಹೊಂದಿರಬೇಕು.

ಸಂಚಾರ ಪೊಲೀಸರು ನಿಲ್ಲಿಸಿದಾಗ ?

ಸಮವಸ್ತ್ರದಲ್ಲಿರುವ ಸಂಚಾರ ಪೋಲೀಸ್ ನಿಮ್ಮ ಚಾಲನಾ ಪರವಾನಿಗೆ ಮತ್ತು ವಾಹನದ ಕಾಗದ ಪತ್ರ ನೋಡುವ ಹಕ್ಕನ್ನು ಹೊಂದಿರುತ್ತಾನೆ. ಅವಶ್ಯವಿದ್ದಲ್ಲಿ ನಿಮ್ಮ ಚಾಲನ ಪರವಾನಿಗೆ ವಶದಲ್ಲಿಟ್ಟುಕೊಳ್ಳಬಹುದು. ಸಂಚಾರ ಪೊಲೀಸ್ ಸಿಬ್ಬಂದಿ ರಸ್ತೆಯಲ್ಲಿ ನಿಮಗೆ ನಿರ್ದೇಶನ ನೀಡದರೆ ಟ್ರಾಫೀಕ್ ಸಿಗ್ನಲ್ ಲೆಕ್ಕಿಸದೇ ನೀವು ಅದನ್ನು ಪಾಲನೆ ಮಾಡಬೇಕು. ರಸ್ತೆಯ ಸಿಗ್ನಲ್ / ತಿರುವಿನಲ್ಲಿ ಸಂಚಾರ ಪೊಲೀಸ್ ಇದ್ದರೆ ಅವನೇ ಅಲ್ಲಿಯ ಅಂತಿಮ ಅಧಿಕಾರಿ. ನಿಲ್ಲಿಸಿದ ವಾಹನ ಮಾಲೀಕ ಪತ್ತೆಯಾಗದೇ ಇದ್ದರೆ ಅದನ್ನು ಎಳೆದುಕೊಂಡು ಹೋಗಬಹುದು. ಅಕ್ಕ ಪಕ್ಕದವರನ್ನು ಕೇಳಿರಿ ಸಾಮಾನ್ಯವಾಗಿ ಸ್ಥಳಿಯ ಅಂಗಡಿಯವರಿಗೆ ವಶಪಡಿಸಿಕೊಂಡ ವಾಹನ ಎಲ್ಲಿ ಇಟ್ಟಿರುತ್ತಾರೆ ಎಂದು ತಿಳಿದಿರುತ್ತದೆ.

 ಪೊಲೀಸರು ಯಾವ ಕ್ರಮವನ್ನು ತೆಗೆದುಕೊಳ್ಳಬಹುದು.

ನಿಮ್ಮ ಪರವಾನಿಗೆಯಲ್ಲಿನ ವಿಷಯಗಳನ್ನು ಬರೆದುಕೊಂಡು ನಂತರ ಮಾನ್ಯ ನ್ಯಾಯಾಲಯಕ್ಕೆ ಕಳುಹಿಸಿಕೊಡುತ್ತಾರೆ. ಮಾನ್ಯ ನ್ಯಾಯಾಲಯವು ವಿಧಿಸಬೇಕಾದ ದಂಡದ ಬಗ್ಗೆ ನಿರ್ದೇಶನವನ್ನು ನೀಡುತ್ತದೆ. ನೀವು ತಪ್ಪಿತಸ್ಥರಾಗಿದ್ದಲ್ಲಿ ಹಣವನ್ನು ಪಾವತಿಸಿದ ನಂತರ ಪ್ರಕರಣ ಮುಕ್ತಾಯವಾಗುತ್ತದೆ. ಇಲ್ಲದಿದ್ದಲ್ಲಿ ನಿಮಗೆ ಸಮನ್ಸನ್ನು ಕಳುಹಿಸಲಾಗುವದು. ನಿಮ್ಮ ಚಾಲಕನ ಪರವಾನಿಗೆಯನ್ನು ವಶದಲ್ಲಿಟ್ಟುಕೊಂಡು ತಾತ್ಕಾಲಿಕ ಪರವಾನಿಗೆ ನೀಡಲಾಗುತ್ತದೆ (ಅದು ನಿಗಧಿತ ಅವಧಿಯಲ್ಲಿ ಕೊನೆಗೊಳ್ಳುತ್ತದೆ). ನಿಮ್ಮ ಅಪರಾಧಕ್ಕೆ ಠಾಣೆಯಲ್ಲಿ ದಂಡವನ್ನು ಕಟ್ಟಿ ನಿಮ್ಮ ಪರವಾನಿಗೆಯನ್ನು ಪಡೆಯಬಹುದು. ಅಲ್ಲದೆ ಮಾನ್ಯ ನ್ಯಾಯಾಲಯದಿಂದ ಸಮನ್ಸ್ ನ್ನು ಸಹ ನೀಡಲಾಗುತ್ತದೆ. ನ್ಯಾಯಾಲಯಕ್ಕೆ ಹಾಜರಾಗಲು ತಪ್ಪಿದಲ್ಲಿ ನಿಮ್ಮ ವಿರುದ್ಧ ವಾರೆಂಟ್ ನ್ನು ಜಾರಿ ಮಾಡಲಾಗುವದು. ಪಾವತಿಸಿದ ದಂಡಕ್ಕೆ ಸಂಬಂದಿಸಿದ ರಶೀದಿಯನ್ನು ನೀಡಲಾಗುವುದು.

ಕೆಲವೊಂದು ಪ್ರಮುಖ ಅಪರಾಧಗಳು.

1] ಚಾಲನೆ ಸಮಯದಲ್ಲಿ ಮಾನ್ಯತೆ ಪಡೆದಿಲ್ಲದ ಲೈಸನ್ಸ್ ನ್ನು ಒಯ್ಯುವದು ಮತ್ತು ಪರವಾನಿಗೆ ಇಲ್ಲದೆ ಚಲಾಯಿಸುವದು.

2] ಪರವಾನಿಗೆ ಹೊಂದಿಲ್ಲದವರಿಗೆ ವಾಹನ ಚಾಲನೆ ಮಾಡಲು ನೀಡುವದು.

3] ವಿಮೆ, ಅನುಮತಿ ಪತ್ರ, ಪೀಟ್ ನೇಸ್, ಇಲ್ಲದೆ ಚಾಲನೆ ಮಾಡುವದು.

4] ಅತೀವೇಗವಾಗಿ ಚಾಲನೆ ಮತ್ತು ಅಜಾಗರೂಕ ಚಾಲನೆ.

5] ಮದ್ಯಪಾನ ಮಾಡಿ ಚಾಲನೆ ಮಾಡುವದು.

6] ಕಡಿದಾದ ಸ್ಥಳದಲ್ಲಿ ಚಾಲನೆ / ಅಪಯಕಾರಿಯಾಗಿ ಅಡ್ಡಾದಿಡ್ಡಿ ಚಲಾಯಿಸುವದು.

7] ಏಕಮುಖ ಸಂಚಾರದ ವಿರುದ್ಧ ಚಾಲನೆ.

8] ಪಾದಚಾರಿಗಳ ತಿರುವಿನಲ್ಲಿ ವಾಹನ ನಿಲ್ಲುಗಡೆ / ನಿಲ್ಲುಗಡೆ ಸ್ಥಳ ದಾಟಿ ನಿಲ್ಲಿಸುವದು.

9] ಹೆಡ್ ಲೈಟ್ ಗಳ ಅನುಚಿತ ಪ್ರಯೋಗ

10] ಖಾಸಗಿ ವಾಹನಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸುವದು.

11] ಅಪಾಯಕಾರಿಯಾಗಿ ಸರಕು ಸಾಗಾಣಿಕೆ ಮಾಡುವದು.

12] ಬಾಡಿಗೆ ವಾಹನದ ಚಾಲಕ ಪ್ರಯಾಣಕ್ಕೆ ನೀರಾಕರಿಸಿದಲ್ಲಿ / ಹೆಚ್ಚಿಗೆ ಬಾಡಿಗೆ ಕೇಳಿದಲ್ಲಿ / ಸಮವಸ್ತ್ರ ಧರಿಸದೆ ಇದಲ್ಲಿ.

13] ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುವದು.       

 

 

ಚಾಲಕರಿಗೆ ಸಲಹೆಗಳು

 

ರಸ್ತೆಯಲ್ಲಿ ಆಗಲಿ ಜೀವನದಲ್ಲಿ ಆಗಲಿ ಪ್ರಯಾಣ ಎಷ್ಟು ಮುಖ್ಯವೋ ಗುರಿಯನ್ನು ಮುಟ್ಟುವುದು ಸಹ ಅಷ್ಠೇ ಮುಖ್ಯ. ಆದ್ದರಿಂದ ನಿಮ್ಮ ನಿಮ್ಮ ಕುಟುಂಬದ ಹಾಗೂ ನಿಮ್ಮ ಸಹ ಪ್ರಯಾಣಿಕರ ಸುರಕ್ಷತೆಗಾಗಿ ಈ ಕೆಳಗಿನ ಸೂಚನೆಗಳನ್ನು ಪಾಲಿಸಿ:.

 ವಾಹನ ಚಲಾಯಿಸುವಾಗ ಎಚ್ಚರದಿಂದರುವುದು : ಚಾಲನೆಯ ಸಮಯದಲ್ಲಿ ನಮ್ಮ ಸಹ ಚಾಲಕರು ಸಂಚಾರಿ ನಿಯಮಗಳನ್ನು ಪಾಲಿಸುತ್ತಾರೆ ಹಾಗೂ ನಾವು ಸುರಕ್ಷಿತವಾಗಿ ಇರುತ್ತೇವೆ ಎಂದು ಭರವಸೆ ಇಡಲು ಆಗುವುದಿಲ್ಲ. ನಾವು ಸದಾ ನಮ್ಮ ಸುತ್ತಮುತ್ತಲಿನ ಕಡೆ ಗಮನ ಹರಿಸುತ್ತಿರಬೇಕು, ಆದರೂ ಕೆಲವು ಸಂಧರ್ಭಗಳಲ್ಲಿ ಬಹಳಷ್ಟು ಕಡಿಮೆ ಸಮಯದಲ್ಲಿ ನಾವು ಸಮರ್ಥಕವಾಗಿ ಅಪಾಯಕಾರಿ ಸಂದರ್ಭ ಗಳನ್ನು ಎದರುಸಿಸಬೇಕು. ಒಂದು ಮಗು ಅಥವಾ ಪ್ರಾಣಿಯು ತಕ್ಷಣದಲ್ಲಿ ರಸ್ತೆಯನ್ನು ದಾಟಬೇಕಾದರೆ ಅಪಾಯ ಎದುರಿಸಬೇಕಾಗುತ್ತದೆ. ಆದಕಾರಣ ನಿಮಗೆ ನೀಡುವ ಸಲಹೆ ಎಂದರೆ ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡಬಾರದು ಯಾವಗಲೂ ವಾಹನಗಳನ್ನು ನಿಲ್ಲಸಿ ಕರೆಗಳನ್ನು ಸ್ವೀಕರಿಸಬೇಕು. ತದನಂತರ ವಾಹನ ಚಲಾವಣೆ ಸಂಧರ್ಭದಲ್ಲಿ ಜೋರಾಗಿ ಸಂಗೀತವನ್ನು ಕಾರಿನಲ್ಲಿ ಆಲಿಸಬಾರದು ಹಾಗೂ ದ್ವಿಚಕ್ರ ವಾಹನ ಸವಾರರು ಇಯರ್ ಫೋನ್ ಬಳಸಬಾರದು.

 1. ಶಿರಸ್ತ್ರಾಣ ಅಥವಾ ಹೆಲ್ಮೇಟ್ ತೊಡುವುದು :ದ್ವಿಚಕ್ರ ಚಾಲಕರು ಶಿರಸ್ತ್ರಾಣ ಹಾಗೂ ಕಾರಿನ ಚಾಲಕರು ಸೀಟ್ ಬೆಲ್ಟನ್ನು ಚಾಲನೆಯ ಸಂಧರ್ಬದಲ್ಲಿ ಬಳಸಬೇಕು. ರಸ್ತೆ ಅಪಘಾತದಲ್ಲಿ ವ್ಯಾಪಕವಾಗಿ ಕಂಡುಬರುವ ಅಂಶವೇನಂದರೆ ತಲೆಗೆ ಪೆಟ್ಟಾಗಿ ಸಾವು ಸಂಭವಿಸುವುದು ಇದಕ್ಕೆ ಕಾರಣ ಸರಳವಾಗಿರುವ ಗುಣಮಟ್ಟದ ಸುರಕ್ಷಿತ ಕ್ರಮಗಳನ್ನು ಪಾಲಿಸದೆ ಇರುವದು. ಶಿರಸ್ತ್ರಾಣಗಳನ್ನು ಬಳಸುವಾಗ ಒಳ್ಳೆಯ ಗುಣಮಟ್ಟದ್ದು ಹಾಗೂ ISI ಪ್ರಮಾಣಿಕೃತ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಬೇಕು. ನಾವು ವೇಗವಾಗಿ ವಾಹನ ಚಲಾಯಿಸುತ್ತಿರುವಾಗ ಶಿರಸ್ತ್ರಾಣದ ಪಟ್ಟಿಯನ್ನು(ಸ್ಟ್ರ್ಯಾಪ್) ಹಾಕಿಕೊಳ್ಳಬೇಕು. ಅಪಘಾತ ಸಂದರ್ಭದಲ್ಲಿ ತಲೆಯಿಂದ ಗಾಳಿಯಲ್ಲಿ ಹಾರಿ ಹೊಗದಂತೆ ಇರಬಾರದು ಅಷ್ಟೇಯಲ್ಲದೆ ಹಿಂಬದಿ ಸವಾರನು ಕೂಡಾ ಶಿರಸ್ತ್ರಾಣ ಬಳಸಿರುವುದನ್ನು  ಖಚಿತಪಡಿಸಿಕೊಳ್ಳಬೇಕು. ಮೂರು ಜನರ ಸವಾರಿಯಿಂದ ದೂರವಿರಬೇಕು ಏಕೆಂದರೆ ದ್ವಿಚಕ್ರ ವಾಹವನ್ನು ವಿನ್ಯಾಸಗೊಳಿಸಿರುವದು ಕೇವಲ ಇಬ್ಬರು ಸವಾರರಿಗೆ ಮಾತ್ರ ಮತ್ತು ವಾಹನದ ಮೇಲೆ ಬಹಳಷ್ಟು ಭಾರವನ್ನು ಹೇರುವುದರಿಂದ ವಾಹನ ಚಾಲನೆ ಏರುಪೇರು ಆಗುವುದು. ರಸ್ತೆ ಅಪಘಾತದಲ್ಲಿ ಸಾವು ಸಂಭವಿಸಲು ಇದೂ ಕೂಡ ಕಾರಣವಾಗುತ್ತದೆ.
 2. ಅತಿಯಾದ ವೇಗದ ಚಾಲನೆ ಬೇಡ :ಅತಿ ವೇಗವಾಗಿ ವಾಹನ ಚಾಲನೆ ಮಾಡುವುದರಿಂದ ಬಹುಷ: ನಾವು ಸಮಯವನ್ನು ಉಳಿಸಬಹುದು ಆದರೆ ಗಮನಾರ್ಹವಾದ ಅಂಶವೆಂದರೆ, ಅಪಘಾತ ಸಂಭವಿಸುವ ಅವಕಾಶ ಹೆಚ್ಚಿರುತ್ತದೆ. ಆದಕಾರಣ ಅತೀಯಾದ ವೇಗವು ಬಹಳ ಭಯಾನಕವಾದುದು ಗಂಭೀರ ಗಾಯಗಳನ್ನುಂಟುಮಾಡುವುದು. ಅತಿಯಾದ ವೇಗದ ಚಾಲನೆಯಿಂದ ವಾಹನವನ್ನು ನಿಯಂತ್ರಣದಲ್ಲಿ ಇಡುವುದು ಕಠಿಣ ಮತ್ತು ಪ್ರತಿ ಚಾಲಕನಿಗೆ ಪ್ರತಿಕ್ರಿಯಿಸುವ ಸಮಯವನ್ನು ಕ್ಷೀಣಿಸುತ್ತದೆ. ಆದ್ದರಿಂದ ರಸ್ತೆಯ ನಿಯಮದಡಿಯ ವೇಗಕ್ಕೆ ಅನುಗುಣವಾಗಿ ಚಾಲನೆ ಮಾಡಬೇಕು ಮತ್ತು ವೇಗದ ಮಿತಿಯನ್ನು ಮೀರಬಾರದು. ಇನೊಬ್ಬ ವಾಹನ ಚಾಲಕನು ವಾಹನವನ್ನು ಅವಸರಿಸಿ ಹೋಗುತ್ತಿದ್ದರೆ ಹಠಮಾರಿತನ ತೋರದೆ ಅವನಿಗೆ ಹೋಗಲು ಸರಿಯಾದ ಅವಕಾಶ ಮಾಡಿಕೊಡಬೇಕು. ನಿಮ್ಮ ಮುಂದೆ ನಿಧಾನವಾಗಿ ಚಲಿಸುವ ವಾಹನವನ್ನು ಹಿಂದಿಕ್ಕಿ ಮುಂದೆ ಹೋಗಬೇಕಾದರೆ ಬಲಗಡೆಯಿಂದ ಹಿಂದೆ ಹಾಗಬೇಕು.
 3. ಮದ್ಯ ಸೇವಿಸಿ ಚಾಲನೆ ಮಾಡಬಾರದು :ಮದ್ಯ ಸೇವನೆ ಚಾಲನೆಯ ಕೌಶಲ್ಯಕ್ಕೆ ತೀವತರವಾದ ಪರಿಣಾಮ ಬೀರುತ್ತದೆ ಇಂತಹ ಸಂದರ್ಭದಲ್ಲಿ, ಪಾನಮತ್ತ ಚಾಲಕನಿಗೆ ನಾವು ಚಾಲನೆಗೆ ಅವಕಾಶ ಮಾಡಿಕೊಡಬಾರದು. ಯಾವಗಲೂ ಮಧ್ಯಸೇವಿಸಿದ ಮೇಲೆ ವಾಹನ ಚಾಲನೆಗೆ ಚಾಲಕನನ್ನು ನೇಮಿಸಬಾರದು. ಸಮಾರಂಭ ಅಥವ ಔತಣಕೂಟದ ನಂತರ ಪ್ರಯಾಣಿಸಲು ಟ್ಯಾಕ್ಸಿ ಅಥವಾ ಆಟೋರಿಕ್ಷಾ ಬಳಸಬೇಕು. ಮದ್ಯ ಸೇವಿಸಿ ಚಾಲನೆ ಮಾಡುವದು ಶಿಕ್ಷಾರ್ಹ ಅಪರಾಧ. ಇದರ ಮೇಲೆ ಹೆಚ್ಚು ದಂಡವನ್ನು ವಿಧಿಸಬಹುದಲ್ಲದೆ ಜೈಲು ಶಿಕ್ಷೆ ಹಾಗೂ ಪರವಾನಿಗೆ ರದ್ದಾಗುವ ಸಂಭವವಿರುತ್ತದೆ.
 4. ಜಿಬ್ರಾ ಕ್ರಾಸಗಳುಸಂಚಾರದ ಸಂಕೇತಗಳುವೇಗದ ಉಬ್ಬುಗಳು ಇದ್ದಾಗ ವಾಹನದ ಮಿತಿ ನಿಧಾನವಾಗಿರುಬೇಕು.

       ಈ ಸ್ಥಳಗಳು ಪಾದಚಾರಿಗಳು ರಸ್ತೆಯನ್ನು ದಾಟಲು ಅವಕಾಶ ಮಾಡುತ್ತವೆ ಅದಲ್ಲದೆ ಎಡ ಮತ್ತು ಬಲಭಾಗದಲ್ಲಿ ತಿರುವುಗಳು ಇದ್ದಾಗ ವಾಹನದ ವೇಗವನ್ನು ಕಡಿಮೆ           \

ಟ್ರಾಫಿಕ ಸಿಗ್ನಲ್ ಮೀರಬಾರದು ಮತ್ತು ಹಾರಬಾರದು :ಒಂದು ವೇಳೆ ಟ್ರಾಫಿಕ ಸಿಗ್ನಲ ಮೀರಿದರೆ ಮುಂದಗಡೆಯಿಂದ ಬೇರೆ ದಿಕ್ಕಿನಿಂದ ಬರುವ ವಾಹನದ ಮೇಲೆ ಅಪಘಾತ ಜರುಗುವ ಸಂಭವ ವಿರುತ್ತದೆ.

 1. ವಾಹನ ದಟ್ಟಣೆ ಜಾಗ ಇರುವ ನಗರ ಪ್ರದೇಶದಲ್ಲಿ ಹೈ ಬೀಮ್ ದೀಪ ಬಳಸಬಾರದುಇದು ಎದುರುಗಡೆ ಇರುವ ಚಾಲಕನಿಗೆ ಕುರುಡುತನ ಏರ್ಪಡುವ ಸಂಭವ ಇರುತ್ತದೆ.
 2. ವಾಹನವನ್ನು ಒಳ್ಳೆಯ ಸ್ಥಿತಿಯಲ್ಲಿ ಇರಿಸಿಕೊಳ್ಳುವುದು.ಇದರಿಂದ ಪ್ರಯಾಣದ ಮಧ್ಯದಲ್ಲಿ ವಾಹನ ಕೆಟ್ಟು ನಿಲ್ಲುವ ಸಾಧ್ಯತೆ ಕಡಿಮೆಯಾಗುತ್ತದೆ. ವಾಹನದ ಹೊಗೆ ಪರೀಕ್ಷೆಯನ್ನು ಕ್ರಮವಾಗಿ ಮಾಡಿಸುತ್ತಿರಬೇಕು ಇದರಿಂದ ವಾಯುಮಾಲಿನ್ಯವನ್ನು ಕಡಿಮೆ ಮಾಡಬಹುದು.
 3. ಅನವಶ್ಯಕವಾಗಿ ವಾಹನದ ಹಾರ್ನ್ ಬಳಸಬಾರದು :ಇದು ಇತರ ವಾಹನಗಳ ಚಾಲಕರಿಗೆ ತೊಂದರೆಯನ್ನು ಕೊಡುತ್ತದೆ, ಹಾಗೆ ಅವರ ಗಮನವನ್ನು ಬೇರೆಕಡೆಗೆ ಸೆಳೆಯುತ್ತದೆ.
 4. ನಿಮ್ಮ ವಾಹನವನ್ನು ಹೆಚ್ಚಾಗಿ ಅಲಂಕರಿಸಬಾರದು :ನಿಮ್ಮ ವಾಹನಕ್ಕೆ ಹಾರ ಮತ್ತು ತೋರಣಗಳನ್ನು ಮಿತಿಯಲ್ಲಿ ಹಾಕಬೇಕು. ಚಾಲಕನಿಗೆ ದಾರಿ ಸರಿಯಾಗಿ ಕಾಣಿಸುವುದಿಲ್ಲ. ಚಾಲಕನ ಗಮನವು ಬೇರೆ ಕಡೆಗೆ ಹರಿಯುತ್ತದೆ.
 5. ನಿಮ್ಮ ವಾಹನ ಡ್ರೈವಿಂಗ್ ಪರವಾನಗಿ, ನೋಂದಣಿ ಪ್ರಮಾಣಪತ್ರ, ಹೊರಸೂಸುವಿಕೆ ಪ್ರಮಾಣಪತ್ರ, ವಿಮೆ ಪ್ರಮಾಣಪತ್ರ ಮತ್ತು ತೆರಿಗೆ ಪ್ರಮಾಣಪತ್ರ  ಮುಂತಾದ ದಾಖಲೆಗಳನ್ನು ಯಾವಾಗಲೂ ನಿಮ್ಮ ಬಳಿ ಇಟ್ಟುಕೊಳ್ಳಿ ಸಾರಿಗೆ ವಾಹನ ಮಾಲೀಕರು ಹೆಚ್ಚುವರಿಯಾಗಿ ಫಿಟ್ನೆಸ್ ಪ್ರಮಾಣಪತ್ರ ಮತ್ತು ಪರವಾನಗಿಯನ್ನು ಇಟ್ಟುಕೊಳ್ಳಬೇಕು. ಈ ದಾಖಲೆಗಳನ್ನು ಯಾವ ಸಮಯದಲ್ಲಾದರೂ ಪೊಲೀಸರು ಕೇಳಬಹುದು.
 6. "ನೋ ಪಾರ್ಕಿಂಗ್" ಪ್ರದೇಶಗಳಲ್ಲಿ ವಾಹನ ನಿಲುಗಡೆಯಿಂದ ಪಾದಚಾರಿಗಳಿಗೆ ಮತ್ತು ಸಂಚಾರಕ್ಕೆ ಅಡಚನೆ ಉಂಟಾಗುತ್ತದೆ. ರಸ್ತೆಯ ಪಕ್ಕದಲ್ಲಿ ನಿಲುಗಡೆ ಮಾಡುವಾಗ, ಪಕ್ಕದ ಗೋಡೆಯಿಂದ 15 ಸೆಂ.ಮೀ.ಗಿಂತ ಹೆಚ್ಚು ದೂರ ನಿಲ್ಲಿಸಬಾರದು.

ಇತ್ತೀಚಿನ ನವೀಕರಣ​ : 25-02-2021 12:33 PM ಅನುಮೋದಕರು: BAGALKOTE DISTRICT POLICE


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬಾಗಲಕೋಟೆ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ