ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

                                         ಬಾಗಲಕೋಟೆ ಜಿಲ್ಲಾ ಪೊಲೀಸ್

 

            ಜನಸ್ನೇಹಿ ಮತ್ತು ನಾಗರಿಕ ಕೇಂದ್ರಿತ ಸೇವೆಗಳನ್ನು ಒಳಗೊಂಡ ನಮ್ಮ ಹೊಸ ವೆಬ್‌ಸೈಟ್‌ನ್ನು ಪ್ರಾರಂಭಿಸಲು ಬಾಗಲಕೋಟೆ ಜಿಲ್ಲಾ ಪೊಲೀಸ್ ಹರ್ಷಿಸುತ್ತದೆ.ಬಾಗಲಕೋಟೆ ಜಿಲ್ಲಾ ಪೊಲೀಸ್ ನ ನಾಗರಿಕ ಕೇಂದ್ರಿತ ಸೇವೆಗಳ ಪ್ರಮುಖ ಮಾಹಿತಿಗಳನ್ನು ಜನರ ಕೈಗೆಟಕುವಂತೆ ಮಾಡಿ ಸಾರ್ವಜನಿಕರ ಮತ್ತು ಪೊಲೀಸರ ನಡುವೆ ಸೇತುವೆ ನಿರ್ಮಿಸುವ ಪ್ರಯತ್ನ ಇದಾಗಿದೆ. ನಾಗರಿಕರಿಗೆ ಅಗತ್ಯ ಪೊಲೀಸ್ ಸೇವೆಗಳನ್ನು ಪೂರೈಸುವ ನಿಟ್ಟಿನಲ್ಲಿ ದೃಶ್ಯೀಕರಿಸಲು ಮತ್ತು ಸಂಯೋಜಿಸಲು ಕಾಳಜಿ ವಹಿಸಲಾಗಿದೆ.

             18 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಬಾಗಲಕೋಟೆ ಜಿಲ್ಲೆಯ ನಾಗರಿಕರ ರಕ್ಷಣೆ ಮತ್ತು ಸುರಕ್ಷತೆಯ ಜವಾಬ್ದಾರಿ ಬಾಗಲಕೋಟೆ ಜಿಲ್ಲಾ ಪೊಲೀಸರ ಮೇಲಿದೆ. ಇದಲ್ಲದೆ ಕಾನೂನು ಮತ್ತು ಸುವ್ಯವಸ್ಥೆ ಠಾಣೆಗಳ ಜೊತೆಗೆ ಜಿಲ್ಲಾ ಕ್ರೈಂ ಇಂಟೆಲಿಜೆನ್ಸ್ ಬ್ಯೂರೋ,ಜಿಲ್ಲಾ ಅಪರಾಧ ದಾಖಲೆ ವಿಭಾಗ,ಜಿಲ್ಲಾ ವಿಶೇಷ ಶಾಖೆ,ಪೊಲೀಸ್ ನಿಯಂತ್ರಣ ಕೊಠಡಿ,ಫಿಂಗರ್ ಪ್ರಿಂಟ್ ಘಟಕ,ಸಂಚಾರ ಪೊಲೀಸ್,ಜಿಲ್ಲಾ ಸಶಸ್ತ್ರ ಮೀಸಲು ಮತ್ತು ಆಡಳಿತ ಮುಂತಾದ ಶಾಖೆಗಳು ಬಾಗಲಕೋಟೆ ಜಿಲ್ಲಾ ಪೊಲೀಸ್ ರಚನೆಯ ಭಾಗವಾಗಿವೆ.ಅಲ್ಲದೇ,ಈ ಎಲ್ಲಾ ಕ್ರಿಯಾತ್ಮಕ ಶಾಖೆಗಳು ಒಂದೇ ಘಟಕದಂತೆ ಒಟ್ಟಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ವೈಯಕ್ತಿಕ ನಾಗರಿಕರ ಮತ್ತು ಸಮುದಾಯದ ಕಲ್ಯಾಣಕ್ಕೆ ಸೇವೆಗಳನ್ನು ತಲುಪಿಸುತ್ತವೆ.

           ಪೊಲೀಸ್ ಅಧೀಕ್ಷಕರು ಜಿಲ್ಲಾ ಪೊಲೀಸ್ ನ ಮುಖ್ಯಸ್ಥರಾಗಿರುತ್ತಾರೆ.ಜಿಲ್ಲಾ ಪೊಲೀಸ್ ವ್ಯಾಪ್ತಿಯನ್ನು 2 ಉಪವಿಭಾಗಗಳಾಗಿ ವಿಂಗಡಿಸಲಾಗಿದೆ -ಬಾಗಲಕೋಟೆ ಉಪವಿಭಾಗ ಮತ್ತು ಜಮಖಂಡಿ ಉಪವಿಭಾಗ.ಪ್ರತಿ ಉಪ ವಿಭಾಗವು ಪೊಲೀಸ್ ಉಪಾಧೀಕ್ಷಕರ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತದೆ.ಪ್ರತಿ ಉಪ ವಿಭಾಗವನ್ನು ಪೊಲೀಸ್ ವೃತ್ತ  ಕಛೇರಿ/ಪೊಲೀಸ್ ನಿರೀಕ್ಷಕ ಠಾಣೆಗಳಾಗಿ ವಿಂಗಡಿಸಲಾಗಿದ್ದು ಪೊಲೀಸ್ ವೃತ್ತ ನಿರೀಕ್ಷಕರ/ಪೊಲೀಸ್ ನಿರೀಕ್ಷಕರ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತವೆ. ಮತ್ತು ಪ್ರತಿ ವೃತ್ತಗಳನ್ನು ಪೊಲೀಸ್ ಠಾಣೆಗಳಾಗಿ ವಿಂಗಡಿಸಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಯ ಅಧಿಕಾರಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಾರೆ.

             ವೆಬ್‌ಸೈಟ್‌ನ ಹೊಸ ಆವೃತ್ತಿಯು ಎಲ್ಲಾ ಪೊಲೀಸ್ ಸೇವೆಗಳ ಬಗ್ಗೆ ಪ್ರತಿಕ್ರಿಯೆ ನೀಡುವ ಸೌಲಭ್ಯವನ್ನು ಹೊಂದಿದೆ,ಇದರಿಂದಾಗಿ ಬಾಗಲಕೋಟೆ ಜಿಲ್ಲಾ ಪೊಲೀಸ್ ಸಲ್ಲಿಸುವ ಸೇವೆಗಳ ಗುಣಮಟ್ಟವನ್ನು ನಾವು ನಿರಂತರವಾಗಿ ಸುಧಾರಿಸಬಹುದು.

ಇತ್ತೀಚಿನ ನವೀಕರಣ​ : 09-02-2021 12:48 PM ಅನುಮೋದಕರು: BAGALKOTE DISTRICT POLICE


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬಾಗಲಕೋಟೆ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ